ಸುದ್ದಿ ಹಾದರಿ ( ) ಎನ್ನುವುದು ಸುದ್ದಿಯನ್ನು ಪಕ್ಷಪಾತದ ಮತ್ತು ಪೂರ್ವನಿರ್ಧರಿತ, ಹಣಕಾಸು ಅಥವಾ ವ್ಯಾಪಾರದ ಅಜೆಂಡಾಕ್ಕೆ ಸರಿಹೊಂದುವಂತೆ ತಪ್ಪುದಾರಿಗೆಳೆಯುವ ರೀತಿಯಲ್ಲಿ ನೀಡುವ ಮುಖ್ಯವಾಹಿನಿಯ ಮಾಧ್ಯಮದ ಪತ್ರಕರ್ತರನ್ನು ಉಲ್ಲೇಖಿಸುವ ಪದವಾಗಿದೆ.ಇಂತಹ ಪತ್ರಕರ್ತರು ಸುದ್ದಿಯನ್ನು ನಿಷ್ಪಕ್ಷಪಾತವಾಗಿ ವರದಿ ಮಾಡುವ ಮೂಲಭೂತ ಕರ್ತವ್ಯವನ್ನು ನಿರ್ಲಕ್ಷಿಸುತ್ತಾರೆ. ಮಾಜಿ ಸೇನಾ ಮುಖ್ಯಸ್ಥ ಮತ್ತು ಭಾರತೀಯ ಕೇಂದ್ರ ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ಜನರಲ್ ವಿಜಯ್ ಕುಮಾರ್ ಸಿಂಗ್ ಅವರು ೨೦೧೫ ರಲ್ಲಿ ತಮ್ಮ ಟ್ವೀಟ್‌ಗಳಲ್ಲಿ ಮಾಧ್ಯಮದ ಒಂದು ವಿಭಾಗವನ್ನು "ಸುದ್ದಿ ಹಾದರಿ" ಎಂದು ಉಲ್ಲೇಖಿಸಲು ಪ್ರಾರಂಭಿಸಿದ ನಂತರ ಈ ಪದವು ಸಾಮಾಜಿಕ ಮಾಧ್ಯಮದಲ್ಲಿ ಜನಪ್ರಿಯವಾಯಿತು ಜುಲೈ ೨೦೨೩ರಲ್ಲಿ, ಯುಕೆಯ ರಾಮಿ ರೇಂಜರ್, ಬ್ಯಾರನ್ ರೇಂಜರ್ ಭಾರತೀಯ ಪತ್ರಕರ್ತೆ ಪೂನಂ ಜೋಶಿ ಅವರು "ಸುದ್ದಿ ಹಾದರಿ"ಯನ್ನು "ಸಂಪೂ‍ರ್ಣ ಮೂರ್ಖತನ " ಮತ್ತು "ಕೊಳಕು ಮತ್ತು ಕಸದ ಸಂಗ್ರಹ" ಎಂದು ಕರೆದಿದ್ದರು. == ಇದನ್ನೂ ನೋಡಿ == ಪತ್ರಿಕೋದ್ಯಮ ಪೋರ್ಟಲ್ ಹಳದಿ ಪತ್ರಿಕೋದ್ಯಮ == ಉಲ್ಲೇಖಗಳು ==